ಮಾಲ್ಗುಡಿ ಡೇಸ್ ಆರ್. ಕೆ. ನಾರಾಯಣ್ ಅವರ ಸಣ್ಣ ಕಥೆಗಳ ಸಂಕಲನ. ಎಲ್ಲಾ ಕಥೆಗಳೂ ದಕ್ಷಿಣ ಭಾರತದಲ್ಲಿನ ಮಾಲ್ಗುಡಿ ಎನ್ನುವ ಕಾಲ್ಪನಿಕ ಹಳ್ಳಿಯಲ್ಲಿ ನಡೆಯುತ್ತವೆ. ಆರ್. ಕೆ. ನಾರಾಯಣ್ ಅವರ ಮಾತಿನಲ್ಲಿ ಮಾಲ್ಗುಡಿ "ಜಗತ್ತಿನ ಯಾವುದೆ ಭಾಗದಲ್ಲಿನ ಚಿರನೂತನ ಪಾತ್ರಗಳ" ಊರು. ಮಾಲ್ಗುಡಿಯು ಸರಯು ನದಿಯ ತೀರದಲ್ಲಿದ್ದು, ಮೆಂಪಿ ಬೆಟ್ಟಗಳಿಂದ ಸುತ್ತುವರೆದಿರುತ್ತದೆ. == ಹಿನ್ನೆಲೆ == ಮಾಲ್ಗುಡಿ ಡೇಸ್ ಧಾರವಾಹಿ ಸರಣಿಯನ್ನು ಕನ್ನಡ ಚಿತ್ರರಂಗದ ಹೆಸರಾಂತ ನಟ ಹಾಗೂ ನಿರ್ದೇಶಕರಾದ ಶಂಕರ್ ನಾಗ್ ಅವರು ನಿರ್ಮಿಸಿದ್ದರು. ಧಾರವಾಹಿಯ ಎಲ್ಲಾ ಭಾಗಗಳನ್ನು ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಚಿತ್ರೀಕರಿಸಲಾಗಿದೆ. ಎಲ್. ವೈದ್ಯನಾಥನ್ ಅವರು ಸಂಗೀತ ನೀಡಿದ್ದು, ಪದಮ್ ರಾಗ್ ಫಿಲಂಸ್ ಸಂಸ್ಥೆಯ ಟಿ.ಎಸ್. ನರಸಿಂಹನ್ ಅವರು ನಿರ್ಮಿಸಿದ್ದಾರೆ. ಧಾರವಾಹಿಯ ಒಂದೊಂದು ಭಾಗವು ಆರ್.ಕೆ.ನಾರಾಯಣ್ ಅವರ ಹಾಗೂ ಸಂಕಲನದ ಕಥೆಗಳಾಗಿವೆ. == ಪಾತ್ರಗಳು == ಡಬ್ಲ್ಯೂ.ಎಸ್.ಸ್ವಾಮಿನಾಥನ್(ಸ್ವಾಮಿ) - ಮಾಸ್ಟರ್ ಮಂಜುನಾಥ್ ಸ್ವಾಮಿಯ ತಂದೆ- ಗಿರೀಶ್ ಕಾರ್ನಾಡ್ ಸ್ವಾಮಿಯ ತಾಯಿ- ವೈಶಾಲಿ ಕಾಸರವಳ್ಳಿ ಸ್ವಾಮಿಯ ಅಜ್ಜಿ - ಸುಹಾಸಿನಿ ಅದರ್ಕರ್ ಬಿ.ಜಯಶ್ರೀ ಮುನಿಯಾ(ಮಿನಿ) - ಕಂಟಿ ಮಾಡಿಯ ಮುನಿಯನ ಹೆಂಡತಿ - ಬಿ.ಜಯಶ್ರೀ ವ್ಯಾಪಾರಿ - ಸೋಮು ಅಮೇರಿಕಾದ(ನ್ಯೂಯಾರ್ಕಿನ ಪ್ರವಾಸಿಗ) - ಟೆಡ್ಡಿ ವೈಟ್ ಡೇವಿನ್ ಭೋಜನಿ -ನಿತ್ಯಾ == ನಟರುಗಳು == ಅನಂತ್ ನಾಗ್ (ಧಾರಾವಾಹಿ ೧೦ ೩೨-೩೯) ವೈಶಾಲಿ ಕಾಸರವಳ್ಳಿ ದಾದಾ (ಧಾರಾವಾಹಿ ೩೦ ಮತ್ತು ೩೧) ಗಿರೀಶ್ ಕಾರ್ನಾಡ್ ಡಾ. ವಿಷ್ಣುವರ್ಧನ್ (ಧಾರಾವಾಹಿ ೧೮) ಶಂಕರ್ ನಾಗ್ (ಧಾರಾವಾಹಿ ೩೯ ಮತ್ತು ೪೦) ರಮೇಶ್ ಭಟ್ ಪದ್ಮಿನಿ ಶಿರಿಶ್ ಅರುಂಧತಿ ನಾಗ್ ಡೇವಿನ್ ಭೋಜನಿ ರಘುರಾಮ್ ಸೀತಾರಾಮ್ ಅಶೋಕ್ ಮಂದಣ್ಣ ಕಾಶಿ ಸುಧೀಂದ್ರ ಲೋಕನಾಥ್ (ಧಾರಾವಾಹಿ ೩೦) ಜಿ.ವಿ.ಅಯ್ಯರ್ ಸಿ.ಆರ್.ಸಿಂಹ ಅಶೋಕ್ ರಾವ್ ಲೋಹಿತಾಶ್ವ ಜಿ.ಕೆ.ಗೋವಿಂದರಾವ್ == ಸಂಚಿಕೆಗಳು == == ಹೊಸ ಆವೃತ್ತಿ == ದೂರದರ್ಶನ್ ವಾಹಿನಿಯು ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕಿ ಕವಿತ ಲಂಕೇಶ್ ಅವರನ್ನು ಮಾಲ್ಗುಡಿ ಡೆಸ್ ದಾರವಾಹಿಯ ೨೬ ಭಾಗಗಳನ್ನು ನಿರ್ಮಿಸಲು ನೇಮಿಸಿದೆ. ಕವಿತ ಅವರು ಎಲ್ಲಾ ಭಾಗಗಳನ್ನು ಹಿಂದಿಯಲ್ಲಿ ನಿರ್ಮಿಸಲಿದ್ದಾರೆ.